ಪುರಾತತ್ವ ಸಂಶೋಧನೆಗೆ ದೂರಸಂವೇದಿ

ಗುಬ್ಬಿ ಲ್ಯಾಬ್ಸ್‌, (2016) ಪುರಾತತ್ವ ಸಂಶೋಧನೆಗೆ ದೂರಸಂವೇದಿ. ಪ್ರಜಾವಾಣಿ, ಬೆಂಗಳೂರು.

[img]
Preview
Text
27June2016-Prajavani.PDF - Published Version

Download (5MB) | Preview
ContributionNameEmail
Abstract: ಒಂದು ಸಮಾಧಿಯೋ ಅಥವಾ ಗೋಡೆಯ ಅವಶೇಷವೋ ಭೂಮಿಯೊಳಗೆ ಇದ್ದರೆ, ಅದರ ಮೇಲೆ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಸಾಂದ್ರವಲ್ಲದ ದುರ್ಬಲ ಸಸ್ಯವರ್ಗ ಹೊಂದಿರುತ್ತದೆ. ಇನ್ನು ಇದೇ ರೀತಿ ಬೇರೆ ಬಗೆಯ ಭೂಬಳಕೆಯನ್ನು ದೂರಸಂವೇದಿ ಚಿತ್ರಗಳಿಂದ ಗುರುತಿಸಬಹುದಾಗಿದೆ. ಪುರಾತತ್ವದ ಬಗ್ಗೆ ಶೋಧನೆ ಎಂದ ಕೂಡಲೇ ಪಾಳುಬಿದ್ದ ಪ್ರದೇಶದಲ್ಲಿ ಏನಾದರೂ ಹುಡುಕಬೇಕು ಅಥವಾ ಹಂಪಿ–ಬಾದಾಮಿ–ಐಹೊಳೆ–ಪಟ್ಟದಕಲ್ಲು ಪ್ರದೇಶಗಳಲ್ಲಿ ಪುರಾತನ ಕಾಲದ ಮಾಹಿತಿ ಏನಾದರೂ ದೊರೆಯುವುದೇ ಎಂದು ಅನ್ವೇಷಿಸಬೇಕು ಎಂಬ ಕಲ್ಪನೆ ಮೂಡುತ್ತದೆ. ಪುರಾತತ್ವ ಶಾಸ್ತ್ರ ನಮ್ಮ ಮನುಕುಲದ ಇತಿಹಾಸವನ್ನು ತಿಳಿಯಲು ನೆರವಾಗುತ್ತದೆ. ಇದರ ಅನ್ವಯ ಪುರಾತತ್ವ ತಜ್ಞರು ಹಲವು ಬಾರಿ ನಿರ್ಜನ ಪ್ರದೇಶಗಳಲ್ಲಿ ಬಿಸಿಲು-ಮಳೆಗೆ ಮೈಯೊಡ್ಡಿ ತಮ್ಮ ಕಾರ್ಯ ನಿರ್ವಹಿಸಿರುವುದು ಇಲ್ಲಿಯವರೆಗೂ ತಿಳಿದ ಅವರ ಕಾರ್ಯವೈಖರಿ. ಆದರೆ, ಇಂದಿನ ಪೀಳಿಗೆಯ ಪುರಾತತ್ವ ತಜ್ಞರು ಉಪಗ್ರಹಗಳಿಂದ ಮಾಹಿತಿಯನ್ನು ಪಡೆದೋ ಅಥವಾ ವಿಮಾನಗಳನ್ನು ಹಾರಿಸಿಯೋ ಅದರಿಂದ ಸೆರೆಹಿಡಿದ ಚಿತ್ರಗಳನ್ನು ಆಧರಿಸಿ ತಮ್ಮ ಸಂಶೋಧನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (NIAS) ಡಾ. ಎಂ.ಬಿ.ರಜನಿ ಮತ್ತು ಅವರ ತಂಡದವರು, ಪುರಾತತ್ವ ಹಾಗೂ ಐತಿಹಾಸಿಕ ರಚನೆಗಳನ್ನು ತಿಳಿಯಲು ಇದೇ ವಿಧಾನಗಳನ್ನು ಬಳಸುತ್ತಿದ್ದಾರೆ. ಉಪಗ್ರಹಗಳು ಭೂಮಿಯ ಮೇಲ್ಮೈಯಲ್ಲಿರುವ ವಸ್ತುಗಳು ಪ್ರತಿಫಲಿಸುವ ಬೆಳಕನ್ನು ಅಳೆಯುವ ಸಂವೇದಕಗಳನ್ನು ಹೊಂದಿವೆ.
Item Type: In the Media
Subjects: School of Humanities > Archaeology
Divisions: Schools > Humanities
Date Deposited: 11 Jul 2016 06:22
Last Modified: 11 Jul 2016 06:22
Official URL: http://www.prajavani.net/article/%E0%B2%AA%E0%B3%8...
Related URLs:
  Funders: UNSPECIFIED
  Projects: UNSPECIFIED
  DOI:
  URI: http://eprints.nias.res.in/id/eprint/1116

  Actions (login required)

  View Item View Item